Wednesday, July 22, 2015

Ede tumbi haadidenu - G.S.Shivarudrappa

ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||ಎದೆ ತುಂಬಿ||


ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ – (೨) ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||ಎದೆ ತುಂಬಿ||

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ  ಹಾಡುವುದು ಅನಿವಾರ್ಯ ಕರ್ಮ ನನಗೆ – (೨) ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು ಮೈ ದುಂಬಿ ಎಂದಿನಂತೆ ಯಾರು ಕಿವಿ ಮುಚ್ಚಿದರೂ – ೨ ನನಗಿಲ್ಲ ಚಿಂತೆ ||ಎದೆ ತುಂಬಿ||

No comments:

Post a Comment