Wednesday, July 22, 2015

Hoovu cheluvella nandendithu - R N Jayagopal

ಹೂವೂ ಚೆಲುವೆಲ್ಲ ನಂದೆಂದಿತು
ಹೆಣ್ಣು ಹೂವ ಮುಡಿದು
ಚೆಲುವೇ ತಾನೆಂದಿತು

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ಧನಿ ವೀಣೆಯ ಖಣಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೇ ಹೆಣ್ಣೆನ್ದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ಸೊಮ್ಪೆನ್ತು
ಹೆಣ್ಣು ನಾಟ್ಯದರಸಿ ಪಾರ್ವತಿಯೇ ಹೆಣ್ಣೆನ್ದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರ ಗಂಗೇ ಹೆಣ್ಣೆನ್ದಿತು

No comments:

Post a Comment