Wednesday, July 22, 2015

chinadantha naadige - Baala bandhana

ಚಿನ್ನದಂತ ನಾಡಿಗೆ ರನ್ನದಂತ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದೂ ಏಳಿಗೆ ಇಲ್ಲ, ಏಳಿಗೆ ಇಲ್ಲ

ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೇ ಹಿರಿಯನಂತೆ ನಡೆದ ಓದದ ಕೋಣ
ಕುದುರೆಗೆರಡು ಕೊಂಬು ಎಂದ ಮಾತಿನ ಮಲ್ಲ
ಹೆಂಡಿರ ಗುಲಾಮರ ಹುಂಬರು ಎಲ್ಲ

ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ಹೊತ್ತಿಗೂಟ ಸುತ್ತೋ ಕೆಲಸ ಅದರ ಪಾಲಿಗೆ
ಅದರ ಎದೆಯ ಗುಡಿಯ ಪೂಜೆಯೆಲ್ಲ ಅವನ ಕಾಲಿಗೆ

ತನ್ನದಾಗಿ ಕಂಡ ಸ್ವತ್ತು ತನ್ನದೇ ಏನು
ಅನ್ಯರಲ್ಲಿ ಇತ್ತ ಕರುಣೆ ಕಣ್ಣುರಿಯೇನು
ಮುಪ್ಪಿನಲ್ಲಿ ಆದವರೆ ಮಕ್ಕಳು ಕೇಳು
ನೀತಿ ಕೆಟ್ಟ ಮಗನಿಗಿಂತ ನಾಯಿಯೇ ಮೇಲು ಒಂದು ನಾಯಿಯೇ ಮೇಲು

https://www.youtube.com/watch?v=_J_pjijFY3M

2 comments: